ಅಧ್ಯಕ್ಷರ ಮಾತು

Vipra Souharda Directors
ಪ್ರಸನ್ನ ಕುಮಾರ್ ಎ.ಆರ್ 

ವಿಪ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ., ಶಿವಮೊಗ್ಗ ಇದರ ಆಡಳಿತ ಮಂಡಳಿಯ ಉಪಾಧ್ಯಕ್ಷರು, ನಿರ್ದೇಶಕರುಗಳು, ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಎಲ್ಲಾ ಸಿಬ್ಬಂದಿಗಳ ಪರವಾಗಿ ನಿಮಗೆ ನನ್ನ ಪ್ರಣಾಮಗಳು.

೨೦೦೫ ನೇ ಇಸವಿಯಲ್ಲಿ ಪ್ರಾರಂಭಗೊಂಡ  ನಮ್ಮ ಸಂಘವು ೨೦ ವರ್ಷಗಳನ್ನು ದಾಟಿ ೨೧ ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಸಾಲಿನ ಮಹಾ ಸಭೆಯು ದಿನಾಂಕ:೧೨-೦೭-೨೦೨೬ ನೇ ಭಾನುವಾರ ಶ್ರೀಮಾತಾ ಮಾಂಗಲ್ಯ ಮಂದಿರ, ಬಿ. ಎಚ್ ರಸ್ತೆ, ಶಿವಮೊಗ್ಗ ಇಲ್ಲಿ ತಮ್ಮೆಲ್ಲರ ಉಪಸ್ಥಿತಿಯಲ್ಲಿ ನಡೆಯಲಿದೆ. ಆ ದಿನ ಮಾನ್ಯ ಸದಸ್ಯರಾದ ತಾವು ಆಗಮಿಸಿ ಸಂಘದ ಮುಂದಿನ ಬೆಳವಣಿಗೆಯ ಬಗ್ಗೆ ಚರ್ಚಿಸಿ, ನಮ್ಮ ಆಡಳಿತದ ಅವಧಿಯಲ್ಲಿ ಏನಾದರೂ ನ್ಯೂನತೆಗಳಿದ್ದರೆ ತಿದ್ದಿ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕೆಂದು ಈ ಮೂಲಕ ಆಮಂತ್ರಿಸುತ್ತಿದ್ದೇನೆ.

ಪ್ರಸ್ತುತ ಸಹಕಾರಿಯು ೧೦ ಶಾಖೆಗಳನ್ನು ಹೊಂದಿದ್ದು, ಹೆಸರಿಗೆ ತಕ್ಕ ರೀತಿಯಲ್ಲಿ ವಿವಿಧೋದ್ದೇಶ ಉದ್ದಿಮೆಗಳನ್ನು ಹೊಂದಿದೆ. ಆರ್ಥಿಕವಹಿವಾಟು ನಡೆಸಲು ಶಿವಮೊಗ್ಗ, ತೀರ್ಥಹಳ್ಳಿ, ಸೊರಬ, ಭದ್ರಾವತಿ, ಅನಂದಪುರ, ಹೊಳಲೂರು ಮತ್ತು ಶಿಕಾರಿಪುರಗಳಲ್ಲಿ ಶಾಖೆಗಳನ್ನು ಹೊಂದಿದೆ.

ಶಿವಮೊಗ್ಗದ ಹೃದಯ ಭಾಗದಲ್ಲಿ ನಮ್ಮದೇ ಆದ ಸ್ವಂತ “ಅಂಕುರ” ವಾಣಿಜ್ಯ ಸಂಕೀರ್ಣದಲ್ಲಿ “ಮಲೆನಾಡು ಮಳಿಗೆ” ಎಂಬ ಸೂಪರ್ ಬಜಾರ್ ಅನ್ನು ನಡೆಸುತ್ತಿದ್ದು ವರದಿ ಸಾಲಿನಲ್ಲಿ ಸುಮಾರು ೩ ಕೋಟಿ ವ್ಯಾಪಾರ ನಡೆದಿರುತ್ತದೆೆ. ನಮ್ಮ ಎಲ್ಲಾ ೪ ರೈತಮಿತ್ರ ಅಡಿಕೆ ಮಂಡಿ ವಹಿವಾಟಿನಿಂದ ಸುಮಾರು ೫೦ ಕೋಟಿ ಅಡಿಕೆ ಮಂಗಡ ನೀಡಿರುತ್ತೇವೆ. ೨೪-೨೫ ನೇ ಸಾಲಿನಲ್ಲಿ ನಮ್ಮ ಎಲ್ಲಾ ರೀತಿಯ ಠೇವಣಿ ರೂ ೮೦ ಕೋಟಿ ಇದ್ದು ವರದಿ ಸಾಲಿನಲ್ಲಿ ೧೨೦ ಕೋಟಿಗೂ ಮೀರಿ ಸಂಗ್ರಹಣೆಯಾಗಿದ್ದು ಸುಮಾರು ೪೦ ಕೋಟಿರೂಗಳ ಠೇವಣಿ ಹೆಚ್ಚಾಗಿದೆ.

ಕಳೆದ ಸಾಲ್ಲಿನಲ್ಲಿ ೧೦೦ ಕೋಟಿ ಇದ್ದ ದುಡಿಯುವ ಬಂಡವಾಳ ಈ ಸಾಲಿನಲ್ಲಿ ೧೩೦ ಕೋಟಿ ದಾಟಿ ಜಿಲ್ಲೆಯ ಪ್ರತಿಷ್ಠಿತ ಸಂsಸ್ಥೆಯಾಗಿ ರೂಪುಗೊಂಡಿದೆ. ಸಹಕಾರಿಯು ೨೫-೨೬ ನೇ ಸಾಲಿನಲ್ಲಿ ಒಟ್ಟು ರೂ ೭೨,೨೧,೯೩೧/- ಲಾಭಗಳಿಸಿದ್ದು ಇದರಲ್ಲಿ ರೂ ೪೦ ಲಕ್ಷ ಅನುತ್ಪಾದಕ ಆಸ್ತಿ ಪ್ರಾವಿಷನ್‌ಗೆ ಕಾಯ್ದಿರಿಸಿದ್ದು ನಿವ್ವಳ ರೂ ೩೨,೨೧,೯೩೧/- ಲಾಭಗಳಿಸಿದ್ದ ಶೇ೧೦ ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ಮಹಾಸಭೆಗೆ ಶಿಫಾರಸ್ಸು ಮಾಡಿರುತ್ತದೆ.

ಈ ವರ್ಷದ ಜನವರಿಯಲ್ಲಿ ಒಂದು ವಿಷೇಶ ಠೇವಣಿ ಯೋಜನೆ ಪ್ರಾರಂಭಿಸಿ ಈ ಯೋಜನೆ “ರೈತಮಿತ್ರ” ವಿಷೇಶ ಠೇವಣಿ ಯೋಜನೆ ಎಂದು ಹೆಸರಿಸಿ ತಮ್ಮ ಸಹಕಾರ ಕೋರಿದ್ದು ತÀಮ್ಮೆಲ್ಲರ ಸಹಕಾರದಿಂದ ಕೇವಲ ೬೦ದಿನಗಳಲ್ಲಿ ಸುಮಾರು ೨೮ ಕೋಟಿ ರೂಗಳ ಠೇವಣಿ ಸಂಗ್ರಹವಾಗಿದ್ದು ತಾವುಗಳು ಸಂಸ್ಥೆಯ ಮೇಲೆ ಇಟ್ಟಭರವಸೆ ಧ್ಯೋತಕವಾಗಿದೆ ಮತ್ತು ನಮ್ಮ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದೆ.

ಕಳೆದ ಮಹಾಸಭೆಯಲ್ಲಿ ತಾವುಗಳು ನೀಡಿದ ಸಲಹೆ ಮೇರೆಗೆ ಸದಸ್ಯರಿಗೆ ಸ್ಮರಣ ನಿಧಿಯೋಜನೆಯನ್ನು ರೂ ೨೦೦೦/- ರಿಂದ ೫೦೦೦/- ರೂಗಳಿಗೆ ಹೆಚ್ಚಿಸಿದ್ದು ನಿಯಮಾನುಸಾರ ಮೃತ ಸದಸ್ಯರ ಕುಟುಂಬಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಈ ಯೋಜನೆಯ ಪ್ರಯೋಜನ ಪಡೆಯಲು ಬಯಸುವ ಸದಸ್ಯರು ಅರ್ಜಿಯೊಂದಿಗೆ ರೂ ೫೦೦/-ರೂಗಳನ್ನು ಈ ನಿಧಿಯಲ್ಲಿ ಸಂದಾಯ ಮಾಡಿ ಸದಸ್ಯರಾಗಲು ಕೋರಿದೆ.

ನಮ್ಮ ಸಹಕಾರಿಯನ್ನು ಇನ್ನೂ ಆರ್ಥಿಕವಾಗಿ ಸಧೃಢಗೊಳಿಸಲು  ನಮ್ಮ ಈಗಿರುವ ಷೇರು ಬಂಡವಾಳವನ್ನು ಹೆಚ್ಚಿಸಬೇಕಾಗಿರುತ್ತದೆ. ನಮ್ಮ ಉಪವಿಧಿಯಲ್ಲಿ ೨೫೦ ಷೇರುಗಳನ್ನು ಪಡೆಯಲು ಅವಕಾಶವಿರುತ್ತದೆ. ಅದ್ದರಿಂದ ತಾವುಗಳು ಹೆಚ್ಚಿನ ಷೇರನ್ನು ಪಡೆಯಲು ಕೋರಿರುತ್ತೆವೆ.

ಬೆಳವಣಿಗೆಯಲ್ಲಿ ನಮ್ಮ ಆಡಳಿತ ಮಂಡಳಿಯ ಉಪಾಧÀ್ಯಕ್ಷರು, ನಿರ್ದೇಶಕರುಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಗಳ ಶ್ರಮಅಡಗಿದೆ.

ಸಹಕಾರಿ ಕಾಯ್ದೆ ಅನ್ವಯ ಸದಸ್ಯರು ಕನಿಷ್ಠ ವ್ಯವಹಾರ ಮಾಡುವುದರೊಂದಿಗೆ ವಾರ್ಷಿಕ ಮಹಾಸಭೆಗೆ ಹಾಜರಾಗುವುದು ಕಡ್ಡಾಯವಾಗಿರುವುದರಿಂದ ಎಲ್ಲಾ ಸದಸ್ಯರು ತಪ್ಪದೆ ಹಾಜರಾಗಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇನೆ.

ತಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡಿ ವಿಷಯಗಳನ್ನು ಮನವರಿಕೆ  ಮಾಡಲು ಸಾಧ್ಯವಾಗದಿರುವುದರಿಂದ ಈ ಪತ್ರದ ಮೂಲಕ ತಮ್ಮನ್ನು ಸಂಪರ್ಕಿಸುತ್ತಿದ್ದೇನೆ. ವಾರ್ಷಿಕ ಮಹಾ ಸಭೆಯಲ್ಲಿ ಭೇಟಿಯಾಗೋಣ.

ಹಿಂದ್ ! ಜೈ ಸಹಕಾರಿ !